`ನಡೆದಾಡುವ ದೇವರು’ ಎಂದೇ ಪ್ರಸಿದ್ಧಿ ಪಡೆದಿದ್ದ, ಅಸಂಖ್ಯಾತ ವಿದ್ಯಾರ್ಥಿಗಳಿಗೆ ಅಕ್ಷರ, ಅನ್ನ ನೀಡುವ ಮೂಲಕ ಎಲ್ಲರ ಬದುಕಿನಲ್ಲಿ ಬೆಳಕು ನೀಡಲು ಪ್ರೇರಣೆ ನೀಡಿದ್ದ ಸಿದ್ಧಗಂಗಾ ಶ್ರೀಗಳ ಆಶೀರ್ವಾದದೊಂದಿಗೆ ಮತ್ತು ಅವರ ಸಮಾಜ ಸುಧಾರಣಾ ಸಿದ್ಧಾಂತದೊಂದಿಗೆ ‘ವಿಶ್ವವಾರಿಧಿ’ ಜನಪ್ರಿಯ ಕನ್ನಡ ದಿನ ಪತ್ರಿಕೆ ರಾಜಧಾನಿ ಬೆಂಗಳೂರು-ತುಮಕೂರು ಸೇರಿದಂತೆ ರಾಜ್ಯದ 22 ಜಿಲ್ಲೆಗಳಲ್ಲಿ ಮುದ್ರಣಗೊಳ್ಳುತ್ತಿದೆ.
ರಾಜ್ಯ ಮತ್ತು ರಾಷ್ಟಮಟ್ಟದ ಪತ್ರಿಕೆಗಳಿಗೆ ಪೈಪೋಟಿ ನೀಡುವಂತಹ ವರ್ಣಮಯ ವಿನ್ಯಾಸ, ವಿಶೇಷ ಲೇಖನ, ಹಬ್ಬದ ಹಿನ್ನೆಲೆ, ಮನರಂಜನೆ, ಹಾಸ್ಯ ಮತ್ತು ಸನಾತನ ಭಾರತೀಯ ಪರಂಪರೆಯ ವಿಶೇಷತೆಗಳನ್ನು ಹೊತ್ತು ತರುವ ಸಂಚಿಕೆಯಾಗಿ ರೂಪುಗೊಳ್ಳಲಿದೆ. ದಿನನಿತ್ಯದ ವಾಚಕರ ಜೊತೆಗೆ ಹೆಚ್ಚುವರಿ ಮಾರಾಟವಾಗುವ ಪತ್ರಿಕೆಯೂ ಆಗಿದೆ. ತುಮಕೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಹಾಸನ, ಮಂಗಳೂರು, ವಿಜಯನಗರ, ಬಳ್ಳಾರಿ, ಚಿಕ್ಕಮಗಳೂರು, ಕೊಡಗು, ಉಡುಪಿ ಮತ್ತು ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ, ದಕ್ಷಿಣ ಕನ್ನಡ, ಚೆನ್ನಮ್ಮನ ನಾಡಿನತ್ತಲೂ ಪತ್ರಿಕೆ ಪ್ರಸರಣಗೊಳ್ಳಲು ಅಣಿಯಾಗುತ್ತಿದೆ. ಇಂದಿನ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಪ್ರತಿನಿತ್ಯ ನಡೆಯುವ ಕ್ಷಣ ಕ್ಷಣದ ಸುದ್ದಿಗಳ ಜೊತೆಗೆ ನಾಡಿನ ಭಾಷೆ, ಕಲೆ, ಸಂಗೀತ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯಗಳ ಹೂರಣದೊಂದಿಗೆ ಪತ್ರಿಕೆ ಹೊರಹೊಮ್ಮುತ್ತಿದೆ.
ಪ್ರತಿಷ್ಠಿತ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿ, ಮುದ್ರಣ ಮಾಧ್ಯಮದಲ್ಲಿ ಅಪಾರ ಅನುಭವ ಹೊಂದಿರುವ ಯಶವಂತ್.ಬಿ. ಅವರ ಕನಸಿನ ಕೂಸಾದ ವಿಶ್ವವಾರಿಧಿ ಪತ್ರಿಕೆ 22 ಜಿಲ್ಲೆಗಳನ್ನು ಬೆಂಗಳೂರು ನಗರದಲ್ಲಿ ಮುದ್ರಣಗೊಂಡು ಓದುಗರಿಗೆ ಸೇರುತ್ತಿದೆ. ಇತ್ತ ತುಂಬುವ ಕೊಳ ತುಳುಕುವುದಿಲ್ಲ ಎಂಬ0ತೆ ತುಮಕೂರು ಜಿಲ್ಲೆಯ ಖ್ಯಾತ ಹಿರಿಯ ಸಾಹಿತಿಗಳಾದ ಬಾ.ಪು.ಜಯದೇವಯ್ಯ(ಬಾಪುಜ)ನವರ ಕುಟುಂಬದಲ್ಲಿ ಬೆಳೆದು ಇವರ ಆಶೀರ್ವಾದದೊಂದಿಗೆ ಪತ್ರಿಕೆಯನ್ನು ರಾಜ್ಯಮಟ್ಟದಲ್ಲಿ ಹೊರತರಲು ಯಶವಂತ್ ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ಬಾಪೂಜ ಅವರ 65ಕ್ಕೂ ಹೆಚ್ಚು ಕೃತಿಗಳು, ಕಾದಂಬರಿಗಳು ತುಮಕೂರು ಜಿಲ್ಲೆಯಲ್ಲಿ ಅಷ್ಟೇ ಅಲ್ಲದೆ ರಾಜ್ಯದ ಮೂಲೆ ಮೂಲೆಗಳಲ್ಲೂ ಪ್ರಖ್ಯಾತಿ ಪಡೆದಿವೆ. ಇವರ ಮಾರ್ಗದರ್ಶನದಂತೆ ‘ವಿಶ್ವವಾರಿಧಿ’ ಪ್ರಕಟಗೊಳ್ಳುತ್ತಿದ್ದು 8-12ವರ್ಣರಂಚಿತ ಪುಟಗಳೊಂದಿಗೆ ಓದುಗರ ಕೈಸೇರುತ್ತಿದೆ.
-ಯಶವಂತ್.ಬಿ.
ಪ್ರಧಾನ ಸಂಪಾದಕರು
ವಿಶ್ವವಾರಿಧಿ ಜನಪ್ರಿಯ ಕನ್ನಡ ದಿನಪತ್ರಿಕೆ
